Card image cap

ಮಹಿಳಾ ಕ್ರಿಕೆಟ್​ ತಂಡಕ್ಕೆ ಕೋಚ್​ ಆಗಿ ರಮೇಶ್ ಪವಾರ್​ ಆಯ್ಕೆ!

ಇತ್ತೀಚೆಗಷ್ಟೇ ಮಹಿಳಾ ತಂಡದ ಕೋಚ್​ ಸ್ಥಾನದಲ್ಲೆ ತುಷಾರ್​ ಅರೋಥೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ರಮೇಶ್​ ಅವರನ್ನು ಮಹಿಳಾ ತಂಡದ ತಾತ್ಕಾಲಿಕ ಕೋಚ್​ ಆಗಿ ಆಯ್ಕೆ ಮಾಡಿದೆ. ಜುಲೈ 25ರಿಂದ ಬೆಂಗಳೂರಿನಲ್ಲಿ ನಡೆಯುವ ಕ್ಯಾಂಪ್​ ವೇಳೆ ತಂಡದ ಕೋಚ್​ ಆಗಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದಾರೆ. ಈಗಾಗಲೇ ಬಿಸಿಸಿಐ ಫುಲ್​ ಟೈಂಕೋಚ್​ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದು, ಜುಲೈ 20 ರೊಳಗೆ ಅರ್ಹರು ಅರ್ಜಿ ಸಲ್ಲಿಸಲು ಗಡುವು ನೀಡಿದೆ.

READ MORE:Dailyhunt
Card image cap

ವಿಕೆಟ್ ಪಡೆದ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್ ಬೌಲರ್

ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ವಿಕೆಟ್ ಕಿತ್ತು ಸಂಭ್ರಮಾಚರಣೆ ಪಡುವ ವೇಳೆ ಕತ್ತನ್ನು ಉಳಿಕಿಸಿಕೊಂಡಿದ್ದಾರೆ. ಸೋಮವಾರ ಬುಲವಾಯೋ ಕ್ರಿಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ಹಸನ್ ಅಲಿ ಜಿಂಬಾಬ್ವೆ ತಂಡದ ರಯಾನ್ ಮುರ್ರೆ ವಿಕೆಟ್ ಕಿತ್ತು ಸಂಭ್ರಮಾಚರಣೆಯ ವೇಳೆ ಕುತ್ತಿಗೆಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದಾರೆ.

READ MORE:Youtube
Card image cap

ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಮೊದಲ ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಸ್ಟಾರ್‌ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ. "ನಮ್‌ ಬಾಸ್‌ ಸಿನಿಮಾ ಯಾವಾಗ ಬರುತ್ತೆ' ಎಂದು ಲೆಕ್ಕ ಹಾಕುತ್ತಿರುವಾಗಲೇ ಪುನೀತ್‌ ರಾಜಕುಮಾರ್‌ ಅವರ ಅಭಿಮಾನಿಗಳಿಗೊಂದು ಸಿಹಿಸುದ್ದಿ ಸಿಕ್ಕಿದೆ. ಅದು ಅವರ ಹೊಸ ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಅದು ಅಕ್ಟೋಬರ್‌ 5. ಹೌದು, ಪುನೀತ್‌ರಾಜಕುಮಾರ್‌ ಅವರ "ನಟ ಸಾರ್ವಭೌಮ' ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಅಕ್ಟೋಬರ್‌ 5ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

READ MORE:Udayavani
Card image cap

ಕ್ರಿಸ್ ಗೇಲ್ ಒಂದೇ ಕೈಯಲ್ಲಿ ಪಡೆದ ಕ್ಯಾಚ್‌ಗೆ ಅಭಿಮಾನಿಗಳು ವಿಸ್ಮಯ

ವೆಸ್ಟ್‌ಇಂಡೀಸ್‌ನ ದೈತ್ಯ ದಾಂಡಿಗ ಕ್ರಿಸ್ ಗೇಲ್ ಕೆನಡಾದಲ್ಲಿ ನಡೆದ ಗ್ಲೋಬಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದ ವೇಳೆ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಅಭಿಮಾನಿಗಳನ್ನು ವಿಸ್ಮಯಗೊಳಿಸಿದರು.

READ MORE:Youtube
Card image cap

ಹೃತಿಕ್‍ಗೆ ಟಕ್ಕರ್ ಕೊಡ್ತಾರಾ ಟೈಗರ್!

ಬಾಲಿವುಡ್ ಮೋಸ್ಟ್ ಮೇಲ್ ಸೆಕ್ಸಿ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ನೃತ್ಯ, ಕಟ್ಟು ಮಸ್ತಿನ ದೇಹದ ಮೂಲಕವೇ ಗುರುತಿಸಿಕೊಂಡಿರುವ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಟೈಗರ್ ತಾವು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ತಮ್ಮ ಡ್ಯಾನ್ಸಿಂಗ್ ಗುರು ಎಂದು ಕರೆದುಕೊಳ್ಳುವ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

READ MORE:Public TV
Card image cap

ಬೌಂಡರಿ ಲೈನ್ ನಲ್ಲಿ ಶಾರೂಕ್ ಹಿಡಿದಿರೋ ಅದ್ಬುತ ಕ್ಯಾಚ್: ವೈರಲ್

ತಮಿಳುನಾಡಿನಲ್ಲಿ ನಡೆಯುತ್ತಿರೋ ತಮಿಳುನಾಡು ಸೂಪರ್ ಲೀಗ್ ನಲ್ಲಿ ಶಾರುಕ್ ಖಾನ್ ಔಟ್ ಸ್ಟ್ಯಾಂಡಿಗ್ ಕ್ಯಾಚ್ ಒಂದನ್ನ ಹಿಡಿದು ಈಗ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ. ಬೌಂಡರಿ ಲೈನ್ ನಲ್ಲಿ ಹಿಡಿದಂತಾ ಬ್ರೆಥ್ ಟೇಕಿಂಗ್ ಕ್ಯಾಚ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

READ MORE:Youtube
Card image cap

ರಷ್ಯಾದಲ್ಲಿ ಬಿಡುಗಡೆಯಾಗಲಿದೆ ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ'

ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ' ಚಿತ್ರ ಬಿಡುಗಡೆಯಾಗಿ ಜನಮನ ಗೆದ್ದಿತ್ತು. ಶಾಂಘೈ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಚಿತ್ರವನ್ನು ನೋಡಿದ ಗಣ್ಯರು ನಿಂತು ಗೌರವ ಕೊಟ್ಟಿದ್ದರು. ಇದೀಗ ಶಿಕ್ಷಕರ ದಿನಾಚರಣೆ ದಿನ ಚಿತ್ರ ರಷ್ಯಾದಲ್ಲಿ ತೆರೆ ಕಾಣಲಿದೆ. ಹಿಚ್ಕಿ ಚಿತ್ರ ರಷ್ಯಾ ಭಾಷೆಗೆ ಡಬ್ ಆಗಿದ್ದು, ಸೆಪ್ಟೆಂಬರ್ ೬ ರಂದು ಬಿಗ್ ಸ್ಕ್ರೀನ್ ನಲ್ಲಿ ತೆರೆ ಕಾಣಲಿದೆ. ತಮ್ಮ ಮೈನಸ್ ಪಾಯಿಂಟ್ ನ್ನು ನಮ್ಮ ಸ್ಟ್ರೆಂಗ್ತ್ ಆಗಿ ಹೇಗೆ ಬದಲಾಯಿಸುವುದು ಅನ್ನೋದನ್ನು ಈ ಚಿತ್ರ ತಿಳಿಸಿದೆ.

READ MORE:Dailyhunt
Card image cap

4ನೇ ವಿಂಬಲ್ಡನ್ ಗೆದ್ದ ಖುಷಿಗೆ ಹುಲ್ಲುತಿಂದ ಜೊಕೊವಿಕ್!

ಈ ಸಾರಿ 2018ರ ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಹುಲ್ಲು ತಿನ್ನುವ ಮೂಲಕ ಬೆರಗು ಮೂಡಿಸಿದ್ದಾರೆ. ಭಾನುವಾರ ನಡೆದ ವಿಂಬಲ್ಡನ್ ನಲ್ಲಿ ಜೊಕೊವಿಕ್ ಅವರು ಸೌತಾಫ್ರಿಕಾದ ಕೆವಿನ್ ಆಯಂಡರ್ಸನ್ ರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಈ ಖುಷಿಗೆ ಜೊಕೊವಿಕ್ ಇಂಗ್ಲೆಂಡ್ ನ ಸೆಂಟರ್ ಕೋರ್ಟ್ ಮೈದಾನದಲ್ಲಿದ್ದ ಹುಲ್ಲು ತಿಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, 'ಹುಲ್ಲು ನಿಜಕ್ಕೂ ರುಚಿಯಾಗಿತ್ತು. ಈ ವರ್ಷ 2(ವಿಂಬಲ್ಡನ್+ಗ್ರ್ಯಾಂಡ್ ಸ್ಲ್ಯಾಮ್)ಸಂಭ್ರಮ ನನ್ನ ಪಾಲಿನದ್ದು. ಹಾಗಾಗಿ ನನಗೆ ನಾನೇ ಸಂಭ್ರಮಿಸಿದ್ದೇನೆ' ಎಂದಿದ್ದಾರೆ

READ MORE:Dailyhunt
Card image cap

ಮಾಹಿತಿ ಕದಿಯುವ ಸಾಧನವನ್ನು ಅಡಗಿಸಿಟ್ಟ ಸಿಬ್ಬಂದಿ ಸೆರೆ

ಬೆಂಗಳೂರು: ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಬೀಕಾನ್​ ಎಂಬ ಬ್ಲೂಟೂತ್​ ಸಾಧನ ಪತ್ತೆಯಾಗಿದ್ದು, ಅದನ್ನು ಗುಟ್ಟಾಗಿ ಅಡಗಿಸಿಟ್ಟಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜು.14ರ ಬೆಳಗಿನ ಜಾವ 5ಗಂಟೆ ಸುಮಾರಿನಲ್ಲಿ ನಿಲ್ದಾಣಕ್ಕೆ ಬಂದಿದ್ದ ಭದ್ರತಾ ಸಿಬ್ಬಂದಿ ವೆನಕಂಡಿ ಸರುಣ್​ ಎಂಬಾತ ಬೀಕಾನ್​ ಬ್ಲೂಟೂತ್​ ಸಾಧನವನ್ನು ಇರಿಸಿದ್ದು ನಿಲ್ದಾಣದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದನ್ನು ಮೆಟ್ರೋ ಅಧಿಕಾರಿ ಫಾರೂಕ್​ ಹುಸೇನ್​ ಎಂಬವರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

READ MORE:Vijayavani
Card image cap

ಉಡುಪಿ: ಪಟ್ಟದ ದೇವರಿಗಾಗಿ ಮುಂದುವರಿದ ಜಟಾಪಟಿ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪೂಜೆಗಾಗಿ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ಮಠಾಧೀಶರು ನಿರಾಕರಿಸುತ್ತಿರುವ ದರೋಡೆಗೆ ಸಮ. ಶ್ರೀ ಕೃಷ್ಣ ನನ್ನ ಆಸ್ತಿಯಲ್ಲ, ರಾಮ ದೇವರು ಕೂಡಾ ನನ್ನ ಆಸ್ತಿಯಲ್ಲ ಆದರೆ ವಿಠಲ ಮಾತ್ರ ನನ್ನ ಸೊತ್ತು. ಪಟ್ಟದ ದೇವರಿಗಾಗಿ ಕ್ರಿಮಿನಲ್ ಕೇಸು ದಾಖಲಿಸಲು ಸಿದ್ದನೆಂದು ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

READ MORE:Daijiworld
Card image cap

ಕಾರ್ಕಳ: ಮಹಿಳೆಯ ಅನುಮಾನಾಸ್ಪದ ಸಾವು, ಓರ್ವನ ಬಂಧನ

ಕಾರ್ಕಳ: ಇಲ್ಲಿನ ಕುಕ್ಕುಂದೂರು ಅಯ್ಯಪ್ಪ ನಗರದ ಕೆರ್ತಾಡಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಿಳೆ ಫ್ಲೋರಿನಾ ಮಚೋಡಾ ಅಲಿಯಾಸ್ ಫ್ಲೋರಿನಾ ಡಿಸೋಜಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಆಗಿದ್ದಾರೆ. ಮೂಲತಃ ಹೊಸ್ಮಾರ್ ನಿವಾಸಿಯಾಗಿದ್ದು, ಪ್ರಸ್ತುತ ಉಳ್ಳಾಲದಲ್ಲಿರುವ ಪತ್ನಿಯ ಮನೆಯಲ್ಲಿ ವಾಸ್ತವ್ಯ ಇದ್ದ ಮಹಮ್ಮದ್ ರಿಯಾಸ್(33) ಬಂಧಿತ ಆರೋಪಿ.

READ MORE:Daijiworld
Card image cap

ಕಡಲ್ಕೊರೆತಕ್ಕೆ 14 ಮನೆಗಳು ಸಮುದ್ರ ಪಾಲು

ಮಂಗಳೂರು: ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಮನೆಗಳು ಸಮುದ್ರದ ಪಾಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ 14ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೈಕೋ‌, ಕಿಲೇರಿಯದಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಟಿ.ಜಿ.ಗುರುಪ್ರಸಾದ್ ಭೇಟಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಸಂತ್ರಸ್ತರಿಗೆ ಒಂಬತ್ತು ಶಾಲೆಗಳಲ್ಲಿ ಗಂಜಿಕೇಂದ್ರ ಸ್ಥಾಪಿಸಲಾಗಿದೆ.

READ MORE:Vijayavani
Card image cap

ಅಪಘಾತಗಳ ಬಗ್ಗೆ ಮಾಹಿತಿ ನೀಡಿದರೆ ಕೇಸು ಹಾಕಲ್ಲ: ಎಸ್ಪಿ

ಉಡುಪಿ: ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಸಹಾಯ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದವರ ವಿರುದ್ಧ ಪ್ರಕರಣ ದಾಖಲಿಸ ಲಾಗುತ್ತದೆ ಎಂಬ ತಪ್ಪು ಮಾಹಿತಿ ಜನರಲ್ಲಿ ಇದೆ. ಪೊಲೀಸರಿಗೆ ಮಾಹಿತಿ ನೀಡಿದರೆ ಯಾರ ಮೇಲೂ ಪ್ರಕರಣ ದಾಖಲಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ. ಉಡುಪಿ ರೋಟರಿ ವತಿಯಿಂದ ನಿಟ್ಟೂರು ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ರಸ್ತೆ ಸುರಕ್ಷತೆ ಮತ್ತು ರಸ್ತೆ ಸಂಚಾರ ಜಾಗೃತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

READ MORE:Varthabharathi
Card image cap

ಭಯ ಹುಟ್ಟಿಸುತ್ತಿದೆ ಬಿರುಗಾಳಿ

ಕಾರವಾರ: ಮಲೆನಾಡಿನಲ್ಲಿ ನಿರಂತರ ಮಳೆಯಿಂದ ನದಿಗಳು ಉಕ್ಕುತ್ತಿದ್ದರೆ ಕರಾವಳಿಯಲ್ಲಿ ಭಾರೀ ಗಾಳಿ ಭಯ ಹುಟ್ಟಿಸುತ್ತಿದೆ. ಇನ್ನೂ ಎರಡು ದಿನ ಮಳೆ ಹಾಗೂ ಗಾಳಿಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯಲ್ಲಿ ಸೋಮವಾರ ಇಡೀ ದಿನ ಮೋಡದ ವಾತಾವರಣವಿತ್ತು. ಆದರೆ ಗಂಟೆಗೆ 45 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಪರಿಣಾಮ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿದ್ದು, ಸಾಂಪ್ರದಾಯಿಕ ಮೀನುಗಾರಿಕೆಯೂ ಸಂಪೂರ್ಣ ಸ್ಥಗಿತವಾಗಿದೆ.

READ MORE:Vijayavani
Card image cap

ಕ್ವಾರಿಗೆ ಬೇಲಿ ಆಗಿಲ್ಲ ಜಾರಿ

ಮಂಗಳೂರು/ಉಡುಪಿ: ದ.ಕ.ಜಿಲ್ಲೆಯಲ್ಲಿ ಮತ್ತೆರಡು ಕ್ವಾರಿ ದುರಂತ ಸಂಭವಿಸಿವೆ. ಇನ್ನಷ್ಟು ಮುಗ್ಧರ ಜೀವ ಪಡೆಯಲು ಕ್ವಾರಿಗಳು ಬಾಯ್ದೆರೆದು ನಿಂತಿವೆ….ಕರಾವಳಿಯಲ್ಲಿ 550ಕ್ಕೂ ಹೆಚ್ಚು ಯಮಸ್ವರೂಪಿ ಹೊಂಡಗಳಿದ್ದು, ಇವುಗಳಿಗೆ ತಡೆಬೇಲಿ ಹಾಕಬೇಕೆಂಬ ಜಿಲ್ಲಾಡಳಿತದ ಆದೇಶ ಇನ್ನೂ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ. ದುರಂತ ನಡೆದಾಗಲಷ್ಟೇ ಎಚ್ಚೆತ್ತುಕೊಳ್ಳುವ ಜಿಲ್ಲಾಡಳಿತ, ಬಳಿಕ ಮೌನ ವಹಿಸುವುದು ಘಟನೆ ಮರುಕಳಿಸಲು ಕಾರಣ ಎಂಬುದು ಸಾರ್ವಜನಿಕ ಆರೋಪ.

READ MORE:Vijayavani
Card image cap

ಯುಎಇ: ಮರುಭೂಮಿಯನ್ನು ಕೃಷಿಭೂಮಿಯಾಗಿಸಲು ಯೋಜನೆ

ದುಬೈ: ಆಹಾರ ಭದ್ರತೆಯನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿರುವ ಯುಎಇ, ವಿಪರೀತ ಹವಾಮಾನ, ನೀರಿನ ಕೊರತೆ ಮತ್ತು ಮಣ್ಣಿನ ಉಪ್ಪಿನಂಶವನ್ನು ನಿಭಾಯಿಸುವ ಹಾಗೂ ಕನಿಷ್ಠ ನೀರಿನಲ್ಲಿ ಬೆಳೆಯುವ ಸ್ಥಳೀಯ ಬೆಳೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಯುಎಇ ತನ್ನ ಆಹಾರದ 80 ಶೇಕಡದಷ್ಟನ್ನು ಈಗ ಆಮದು ಮಾಡಿಕೊಳ್ಳುತ್ತಿದೆ. ಮುಂದಿನ 33 ವರ್ಷಗಳಲ್ಲಿ 60 ಶೇಕಡ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯುವ ಯೋಜನೆಯನ್ನು ಅದು ಹಾಕಿಕೊಂಡಿದೆ.

READ MORE:Varthabharathi
Card image cap

ಸೌದಿ: ಭಾರೀ ಮಳೆ ಮುನ್ನೆಚ್ಚರಿಕೆಗಾಗಿ ಆಧುನಿಕ ವ್ಯವಸ್ಥೆ

ಜಿದ್ದಾ: ಸೌದಿ ಅರೇಬಿಯದಲ್ಲಿ ಭಾರೀ ಮಳೆ ಸುರಿಯುವುದನ್ನು ಮುಂಚಿತವಾಗಿ ತಿಳಿಯಲು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ನೆರವು ನೀಡುವ ವ್ಯವಸ್ಥೆಯೊಂದನ್ನು ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಜಾರಿಗೊಳಿಸಿದೆ. ‘ಮಾತಿರ್’ ಎಂದು ಕರೆಯಲ್ಪಡುವ ಈ ಉನ್ನತ ತಂತ್ರಜ್ಞಾನ ವ್ಯವಸ್ಥೆಯು ಅರಬ್ ವಲಯದಲ್ಲೇ ಪ್ರಥಮವಾಗಿದೆ.

READ MORE:Varthabharathi
Card image cap

ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ. ರೀಟಾ ಅವರ ನಿಧನವಾಗಿರುವ ವಿಷಯವನ್ನು ಹಿರಿಯ ನಟ ಶಿಶಿರ್ ಶರ್ಮಾ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅವರು ನಮಗೆಲ್ಲಾ ತಾಯಿಯಾಗಿದ್ದರು. ಅವರು ನಮಗೆ ತುಂಬಾ ನೆನಪಾಗುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

READ MORE:Public TV
Card image cap

ಸಂಚಾರಕ್ಕೆ ಅಪಾಯಕಾರಿಯಾದ ಕಾರ್ಕಳದ ರಸ್ತೆಗಳು

ಕಾರ್ಕಳ: ಕೇವಲ ಒಂದೇ ತಿಂಗಳ ಮಳೆಗೆ ಪಟ್ಟಣದ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಚಾಲಕರ ಪಾಲಿಗೆ ಕಟಂಕವಾಗಿ ಪರಿಣಮಿಸಿದೆ.ಕಳೆದ 2015ರಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನಗರದ ಎಲ್ಲಾ ರಸ್ತೆಗಳ ವಿಸ್ತರಣಕ್ಕೆ ಸುಮಾರು 11ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಅಷ್ಟೊಂದು ಭಾರೀ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಬಳಕೆಯಾಗಿದ್ದು, ಕೇವಲ ಮೂರೇ ವರ್ಷಗಳಲ್ಲಿ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ

READ MORE:karavaliale
Card image cap

ಮಂಗಳೂರು -ಮೂಡುಬಿದಿರೆ ಸರ್ಕಾರಿ ಬಸ್ ಸೇವೆ ಯಾಕಿಲ್ಲ ?

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ ಓಡಾಡಲು ಈಗಾಗಲೇ 8 ಕೆಎಸ್ಸಾರ್ಟಿಸಿ  ಬಸ್ಸುಗಳಿಗೆ ಪರವಾನಿಗೆ ಸಿಕ್ಕಿದ್ದರೂ ಇದರ ವಿರುದ್ಧ ಖಾಸಗಿ ಬಸ್ ಮಾಲಕರು ಕೋರ್ಟ್ ಮೆಟ್ಟಲೇರಿರುವುದರಿಂದ ಸರಕಾರಿ ಬಸ್ ಸೇವೆ ಒದಗಿಸಲು ಸಾಧ್ಯವಾಗಿಲ್ಲ. ಪ್ರಕರಣ ಜಿಲ್ಲಾಡಳಿತದ ಮುಂದಿದ್ದು, ಅವರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಕರಾದ ಜಯಶಾಂತ್ ಹೇಳಿದರು.

READ MORE:karavaliale