Card image cap

ಕುಡ್ಲದ ಪ್ರಥಮ ಆಮ್ಲೆಟ್ ಅಂಗಡಿ ತೆರೆಮರೆಗೆ... ಆಮ್ಲೆಟ್​ ಪ್ರಿಯರಿಗೆ ಬೇಸರ

ಮಂಗಳೂರು: ಮಂಗಳೂರಿನ ಜನತೆಗೆ ಮೊದಲ ಬಾರಿಗೆ ಆಮ್ಲೆಟ್ ರುಚಿಯನ್ನು ಉಣಬಡಿಸಿದ್ದ ಎಸ್.ಆರ್. ಭಂಡಾರಿ ಆಮ್ಲೇಟ್ ಶಾಪ್ ಈ ವರ್ಷಾಂತ್ಯಕ್ಕೆ ಮುಚ್ಚಲಿದ್ದು, ಇದರಿಂದ ಇಲ್ಲಿ ಯಾವಾಗಲೂ ಆಮ್ಲೆಟ್ ಸವಿಯನ್ನು ಸವಿಯುತ್ತಿದ್ದ ಆಮ್ಲೆಟ್ ಪ್ರಿಯರಿಗೆ ತೀರಾ ನಿರಾಸೆಯಾಗಿದೆ. ಆಮ್ಲೆಟ್ ಭಂಡಾರಿ', 'ಭಂಡಾರಿ ಮಾಮು' ಎಂದೇ ಪ್ರಖ್ಯಾತರಾದ ಎಸ್.ಆರ್. ಭಂಡಾರಿಯವರು ಸುಮಾರು 52 ವರ್ಷಗಳಿಂದ ಆಮ್ಲೆಟ್ ಸವಿಯನ್ನು‌ ನಗರದ ಜನತೆಗೆ ಉಣಬಡಿಸುತ್ತಿದ್ದಾರೆ.

READ MORE:kannada.eenaduindia
Card image cap

ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು

ತಾಲೂಕಿನ‌ ಬೊಮ್ಮನಹಳ್ಳಿ ಗ್ರಾಮದ ಬಳಿ ಕಾಳಿನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಧೂಳು ಗಾವಡೆ (48). ಕೃಷ್ಣಾ ಧೂಳು ಗಾವಡೆ (6), ಗಾಯತ್ರಿ ಧೂಳು ಗಾವಡೆ (9), ಸತೀಶ್​ ಬೀರು ಗಾವಡೆ (7) ಎಂದು ಗುರುತಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಇನ್ನೊಬ್ಬ ಮಹಿಳೆ ರಾಮಿಬಾಯಿ ಎಂಬುವವರನ್ನು ಸ್ಥಳೀಯರು ರಕ್ಷಿಸಿ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

READ MORE:Vijayavani
Card image cap

ಸುಬ್ರಹ್ಮಣ್ಯ ಪೇಟೆ: ಸಂಚಾರ ನಿರ್ವಹಣೆ ದೊಡ್ಡ ಸವಾಲು

ಸುಬ್ರಹ್ಮಣ್ಯ: ವಾಹನ ನಿಷೇಧಿತ ಸ್ಥಳವಾಗಿದ್ದರೂ ರಸ್ತೆ, ಫ‌ುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುವ ಸವಾರರು, ಪರದಾಡುವ ಪಾದಚಾರಿಗಳು. ಪಾರ್ಕಿಂಗ್‌ ಜಾಗವಿದ್ದರೂ ನಿಯಂತ್ರಣಕ್ಕೆ ಯಾವುದೇ ಸಮರ್ಪಕ ವಾದ ವ್ಯವಸ್ಥೆ ಜಾರಿ ಇಲ್ಲದಿರುವುದರಿಂದ ಎಲ್ಲರಿಗೂ ಸಮಸ್ಯೆ. ಇದು ಕುಕ್ಕೆ ಸುಬ್ರಹ್ಮಣ್ಯ ನಗರದ ಚಿತ್ರಣ. ದಕ್ಷಿಣ ಭಾರತದ ಸರ್ವಶ್ರೇಷ್ಠ, ರಾಜ್ಯದ ನಂ. 1 ದೇಗುಲವೆನಿಸಿದ ಕುಕ್ಕೆ ಸುಬ್ರಹ್ಮಣ್ಯ ನಗರದಲ್ಲಿ ಸಂಚಾರ ಸಮಸ್ಯೆ ಪ್ರತಿನಿತ್ಯದ ಗೋಳು. ಸಂಚಾರ ನಿರ್ವಹಣೆಯೇ ಇಲ್ಲಿ ಬಹುದೊಡ್ಡ ಸವಾಲಾಗಿದೆ.

READ MORE:Udayavani
Card image cap

ಆಂಧ್ರಕ್ಕೆ ಅಪ್ಪಳಿಸಿದ ಪೆಥಾಯ್‌: ಇಬ್ಬರ ಸಾವು

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಸೋಮವಾರ ಮಧ್ಯಾಹ್ನ "ಪೆಥಾಯ್‌' ಚಂಡಮಾರುತ ಅಪ್ಪಳಿಸಿದ್ದು, ವಿಜಯವಾಡ ನಗರದಲ್ಲಿ ಉಂಟಾದ ಭೂ ಕುಸಿತಕ್ಕೆ ಒಬ್ಬ ವ್ಯಕ್ತಿ ಮೃತಪಟ್ಟರೆ, ಪಲ್ಲೆಪಾಲಂನಲ್ಲಿ 68 ವರ್ಷದ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಚಂಡಮಾರುತದಿಂದಾಗಿ ಆಂಧ್ರದಲ್ಲಿ ಭಾರೀ ಮಳೆಯಾದ ಕಾರಣ, ಜನಜೀವನ ಅಸ್ತವ್ಯಸ್ತ ವಾಗಿದೆ. ಕನಿಷ್ಠ 50 ಪ್ರಯಾಣಿಕರ ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳ ಸಂಚಾ ರದ ಸಮಯವನ್ನು ಬದಲಿಸಲಾಗಿತ್ತು.

READ MORE:Dailyhunt
Card image cap

ಮೊಬೈಲ್ ಫೋನಿಗಾಗಿ ಗಲಾಟೆ: ಪ್ರಿನ್ಸಿಪಾಲ್ ಮಗಳು ಆತ್ಮಹತ್ಯೆ

ಹೈದರಾಬಾದ್: ಮೊಬೈಲ್ ಫೋನ್ ವಿಚಾರಕ್ಕೆ ನಡೆದ ಗಲಾಟೆಯಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ. ಸುಚಿತ್ರಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಂಭಾಂ ದಾಮೋದರ್ ರೆಡ್ಡಿಯ ಹಿರಿಯ ಪುತ್ರಿಯಾಗಿದ್ದು, ಇವರು ಖಾಸಗಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

READ MORE:Public TV
Card image cap

ಶ್ರೀಕ್ಷೇತ್ರ ಕಡಂದಲೆಯಲ್ಲಿ ಧ್ವಜಾವರೋಹಣದ ಸಂದರ್ಭ ಅವಘಡ - ಕಳಚಿ ಬಿದ್ದ ಗರುಡ

ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ವಿಸರ್ಜನ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಸೋಮವಾರ ನಡೆದ ಧ್ವಜಾವರೋಹಣದ ಸಂದರ್ಭ ಧ್ವಜಸ್ಥಂಭದ ರಾಟೆ ಕಳಚಿ, ಗರುಡ, ಕಿರುಗಂಟೆ ಕೆಳಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆ ಸಂದರ್ಭ ಯಾವುದೇ ಅಪಾಯ ಉಂಟಾಗಿಲ್ಲ, ಪ್ರಾಯಶ್ಚಿತ ವಿಧಿಯಾಗಿ ದೇವರಿಗೆ 48 ಕಲಶ ಅಭಿಷೇಕ ಮಾಡಲಾಯಿತು.

READ MORE:Daijiworld
Card image cap

ಶೀಘ್ರದಲ್ಲೇ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಹಣ್ಣು ವಿತರಣೆ?

ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಕಡ್ಡಾಯ ಹಾಗೂ ಮೊಟ್ಟೆ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿರುವಂತೆ ಬಿಸಿಯೂಟದೊಂದಿಗೆ ಹಣ್ಣು ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಪ್ರತಿದಿನ ಅಥವಾ ಪರ್ಯಾಯ ದಿನಗಳಲ್ಲಿ ಆಯಾ ಖುತುವಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಹಣ್ಣು ಪರಿಚಯಿಸುವ ಸಂಬಂಧ ಇಲಾಖೆಯ ಅಧಿಕಾರಿಗಳ ಮಟ್ಟದಲ್ಲಿ ಪ್ರಾಥಮಿಕ ಮಟ್ಟದ ಚರ್ಚೆ ನಡೆದಿದೆ.

READ MORE:Kannadaprabha
Card image cap

ಮಂಗಳೂರು ಕಚೇರಿಗಳಲ್ಲಿಲ್ಲ ಸಕಾಲ ಸೂಚನಾ ಫಲಕ

ಮಂಗಳೂರು: ಸರ್ಕಾರದ ಪ್ರತಿ ಕಚೇರಿಯಲ್ಲಿ ಸಕಾಲ ಸೂಚನಾ ಫಲಕ ಮತ್ತು ಕೌಂಟರ್ ಇರುವುದು ಕಡ್ಡಾಯ. ಆದರೆ ಯೋಜನೆ ಜಾರಿಯಾಗಿ 7 ವರ್ಷ ಕಳೆದರೂ ದ.ಕ. ಜಿಲ್ಲೆಯ ಬಹುತೇಕ ಕಚೇರಿಗಳಲ್ಲಿ ಇಂದಿಗೂ ಸಕಾಲ ಸೂಚನಾ ಫಲಕವಿಲ್ಲ. ಸ್ವತಃ ಸಕಾಲ ಮಿಷನ್ ಆಡಳಿತಾಧಿಕಾರಿ ಜಿಲ್ಲೆಗೆ ಭೇಟಿ ನೀಡಿ ಖಡಕ್ ಸೂಚನೆ ನೀಡಿದ್ದರೂ ಅಧಿಕಾರಿಗಳು ಮಾನ್ಯತೆ ನೀಡಿಲ್ಲ.

READ MORE:Vijayavani
Card image cap

ಉಡುಪಿ : ಡಿ.18ರಂದು ಕೇಬಲ್ ಆಪರೇಟರ್ಸ್‌ಗಳಿಂದ ಪ್ರತಿಭಟನೆ

ಸರಕಾರ ಕೇಬಲ್ ಆಪರೇಟರ್ಸ್‌ಗಳ ಮೇಲೆ ಗದಾ ಪ್ರಹಾರ ನಡೆಸಿದೆ. ಟ್ರಾಯ್‌ನ ಹೊಸ ಕಾನೂನು ಜಾರಿಗೆ ಆದ್ರೆ ಕೇಬಲ್ ಆಪರೇಟರ್‌ಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೇಂದ್ರ ಸರಕಾರದ ನೂತನ ನೀತಿಯ ವಿರುದ್ದ ಡಿಸೆಂಬರ್ 18ರಂದು ಉಡುಪಿ ರಜತಾದ್ರಿಯ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ. ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಕೇಬಲ್‌ನ ಮೂಲಕ ಗ್ರಾಹಕರಿಗೆ 250ರಿಂದ 300 ರೂ ಒಳಗೆ 200ಕ್ಕೂ ಹೆಚ್ಚು ಚಾನೆಲ್‌ಗಳು ಲಭ್ಯವಾಗುತ್ತಿದೆ.

READ MORE:V4 News
Card image cap

ಮಲ್ಪೆ ಬೋಟಿನಲ್ಲಿ ಶವ ಪತ್ತೆ ಕೊಲೆ ಶಂಕೆ

ಮಲ್ಪೆ: ಮೀನುಗಾರಿಕಾ ಬೋಟಿನ ಕಾರ್ಮಿಕರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿ ತಾಲೂಕಿನ ಮಲ್ಪೆಯಲ್ಲಿ ನಡೆದಿದೆ. ರವಿವಾರ ರಾತ್ರಿ ಪಾಳಿ ಕಾವಲು ಕಾಯುತ್ತಿದ್ದ ಒಡಿಶಾ ಮೂಲದ ಕಾರ್ಮಿಕ ಕೊಲೆಯಾದ ದುರ್ದೈವಿ. ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಬೋಟ್ ಅನ್ನು ರಿಪೇರಿ ಮಾಡಲು ನೀರಿನಿಂದ ಮೇಲೆತ್ತಿದಾಗ ಬೋಟಿನ ಇಂಜಿನ್ ಕೊಣೆಯಲ್ಲಿ ಶವ ಪತ್ತೆಯಾಗಿದೆ. ಉತ್ತರ ಕರ್ನಾಟಕ ಮೂಲದ ಕಾರ್ಮಿಕ ಈ ಕೊಲೆಗೈದಿರುವ ಶಂಕೆ ವ್ಯಕ್ತಪಡಿಸಲಾಗಿದೆ.

READ MORE:Dailyhunt
Card image cap

ಪ್ರಸಾದ ವಿಷ ದುರಂತ – ತಬ್ಬಲಿಯಾದ ಮೂವರು ಮಕ್ಕಳಿಗೆ ಆಳ್ವಾಸ್ ಆಸರೆ

ಮಂಗಳೂರು: ಸುಳ್ವಾಡಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದ ದುರಂತದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಮೂರು ಮಕ್ಕಳಿಗೆ ಆಳ್ವಾಸ್ ಸಂಸ್ಥೆ ಆಸರೆಯಾಗಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂವರು ಮಕ್ಕಳನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದು, ಮೂವರು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿದೆ. ಅಷ್ಟೇ ಅಲ್ಲದೇ ಉಚಿತ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿದೆ.

READ MORE:Public TV
Card image cap

ಭುವನ ಸುಂದರಿ-2018 ಪಟ್ಟ ಫಿಲಿಪೈನ್ಸ್ ಪಾಲು

ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಭುವನ ಸುಂದರಿ ಪಟ್ಟ ಒಲಿದಿದ್ದು, ದಕ್ಷಿಣ ಆಫ್ರಿಕಾ ಹಾಗೂ ವೆನಿಜ್ಯುವೆಲ್ಲಾದ ಸುಂದರಿಯರು ನಂತರದ ಎರಡು ಸ್ಥಾನದಲ್ಲಿದ್ದಾರೆ. ಭಾರತದಿಂದ ಆಯ್ಕೆಯಾಗಿದ್ದ ನೆಹಾಲ್ ಚುದಾಸಮಾ ಟಾಪ್ 20 ಪಟ್ಟಿಯಿಂದ ಹೊರಗುಳಿದಿದ್ದಾರೆ. 2017 ನೇ ಸಾಲಿನ ಭುವನ ಸುಂದರಿ ದಕ್ಷಿಣ ಆಫ್ರಿಕಾದ ಡೆಮಿ ಲೀ ನೆಲ್-ಪೀಟರ್ಸ್ ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಗೆ ಕಿರೀಟ ತೊಡಿಸಿದ್ದಾರೆ.

READ MORE:Kannadaprabha
Card image cap

ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಆನ್‌ಲೈನ್ ಬುಕಿಂಗ್ ವ್ಯವಸ್ಥೆ

ಧರ್ಮಸ್ಥಳ: ಶಾಂತಿವನದಲ್ಲಿರುವ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವವರಿಗೆ ಅನುಕೂಲವಾಗಲು ರೂಪಿತವಾದ ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಸಂಬಂಧಿತ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳದ ಶ್ರೇಯಸ್ ಕುಮಾರ್, ನಿಶ್ಚಲ್ ಡಿ. ಮಾರ್ಗದರ್ಶನದಲ್ಲಿ ವೈರ್‌ಕ್ಯಾಂಪ್ ಎಂಬ ಸಂಸ್ಥೆ ನಿರ್ವಹಿಸಿದೆ.

READ MORE:Vijayavani
Card image cap

ಪ್ರಧಾನಿ ಮೋದಿ ಕನಸಿನ 'ಟ್ರೈನ್ 18' ಸಂಚಾರದ ಮಾರ್ಗ ಕೊನೆಗೂ ಫೈನಲ್..!

ಟ್ರೈನ್ 18 ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಇದೇ ವರ್ಷದ ಕೊನೆಯಲ್ಲಿ ಸೇವೆಗೆ ಸಿದ್ದವಾಗಿದೆ. ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಪರೀಕ್ಷಾರ್ಥ ಸಂಚಾರದ ವೇಳೆ ಹೊಸ ದಾಖಲೆ ನಿರ್ಮಿಸಿತ್ತು. ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿತ್ತು.

READ MORE:kannada.drivespark
Card image cap

ಕಾಸರಗೋಡು: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಕಾಸರಗೋಡಿನಲ್ಲಿ ನಕಲಿ ನೋಟುಗಳ ಹಾವಳಿ ಕಂಡುಬಂದಿದ್ದು, ನಗರದ ಮೀನು ಮಾರುಕಟ್ಟೆಗೆ ತಲುಪಿದ ವ್ಯಕ್ತಿಯೋರ್ವನನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಉದುಮದ ಅಬೂಬಕ್ಕರ್ ಸಿದ್ದಿಕ್ (44) ಎಂಬಾತನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬೆಳಿಗ್ಗೆ ಕಾಸರಗೋಡಿನ ಮೀನು ಮಾರುಕಟ್ಟೆಗೆ ಬಂದು ಮೀನು ಖರೀದಿಸಿದ ಸಿದ್ದಿಕ್ ಎರಡು ಸಾವಿರ ರೂ . ನೋಟು ನೀಡಿದ್ದು, ಸಂಶಯಗೊಂಡು ನೋಟನ್ನು ಪರಿಶೀಲಿಸಿದಾಗ ನಕಲಿ ಎಂದು ಕಂಡು ಬಂದಿದೆ.

READ MORE:Daijiworld
Card image cap

ವಿಮಾನ ಮತ್ತು ಹಡಗಿನಲ್ಲಿನ್ನು ಇಂಟರ್‌ನೆಟ್ ಸೌಲಭ್ಯ!..ಆದರೆ ಬೆಲೆ ಕೇಳಿ ಬೆಚ್ಚಿಬೀಳಬೇಡಿ!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದ್ದು, 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಎನ್ನುವುದು ಟ್ರಾಯ್‌ ಹೇಳಿದ ನಂತರ ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಂವಹನ ಇಲಾಖೆ ಮುಂದಾಗಿದೆ. ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಎಲ್ಲರನ್ನು ಹೌರಾರುವಂತೆ ಮಾಡಿದೆ. ಪ್ರಯಾಣದ ವೇಳೆ ಅರ್ಧ ಗಂಟೆ ಇಂಟರ್‌ನೆಟ್ ಬಳಕೆಗೆ 500 ರೂ. ಹಾಗೂ ಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದ್ದು, ಪ್ರಯಾಣಿಕರು ಹೌರಾರಿದ್ದಾರೆ.!

READ MORE:gizbot
Card image cap

ಪೋಕ್ಮನ್ ಗೋನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಫೀಚರ್

ಪೋಕ್ಮನ್ ಗೋ ನಲ್ಲಿ ಆಟಗಾರರು ಇದೀಗ ಒಬ್ಬರನೊಬ್ಬರು ಪರಸ್ಪರ ಯುದ್ಧ ಮಾಡಿಕೊಳ್ಳಬಹುದು. ಬಹಳ ದಿನಗಳಿಂದ ಕಾಯುತ್ತಿದ್ದ ಹೊಸ ಅಪ್ ಡೇಟ್ ಇದೀಗ ಬಿಡುಗಡೆಗೊಳ್ಳುತ್ತಿದೆ. ತರುಬೇತುದಾರ ಬ್ಯಾಟಲ್ಸ್—ಪೋಕ್ಮನ್ ಗೋ ಗೆ ಪಿವಿಪಿ ಮೋಡ್ ಸೇರ್ಪಡೆಯಾಗುತ್ತಿದ್ದು ಇದೀಗ ಆಟಗಾರರು ಇದರ ಅನುಭವವನ್ನು ಪಡೆಯಬಹುದು. ಹೊಸ ಅಪ್ ಡೇಟ್ ನಲ್ಲಿ ಪೋಕ್ಮನ್ ಆಟಗಾರರು ಹೊಸ ಸ್ನೇಹಿತರನ್ನು ಸೇರಿಸುವುದಕ್ಕೆ ಕ್ರಿಯೇಚರ್ ಗಳ ಬಳಕೆಯನ್ನು ಮಾಡಬಹುದು.

READ MORE:gizbot
Card image cap

ಚಿಕ್ಕಮಗಳೂರಿನ ಈ 65 ವರ್ಷದ ಅಜ್ಜಿಗೆ ರಾಷ್ಟ್ರಮಟ್ಟದಲ್ಲಿ 2ನೇ ರ‍್ಯಾಂಕ್

ಮದುವೆಯಾದ ನಂತರ ತನ್ನ ಇಪ್ಪತ್ತೆಂಟನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಪಂಕಜಾ ಅವರು ಅರಣ್ಯ ಇಲಾಖೆಯಲ್ಲಿ ಗುಮಸ್ತರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಳೆದ ಸೆಪ್ಟೆಂಬರ್​ನಲ್ಲಿ ನಡೆಸಿದ ಹಿಂದಿ ಪ್ರವೇಶಿಕ ಪರೀಕ್ಷೆಯಲ್ಲಿ ಅವರು 83 ಅಂಕಗಳನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಎರಡನೇ ರ‍್ಯಾಂಕ್ ಪಡೆದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಅಜ್ಜಿ ತೋರಿಸಿಕೊಟ್ಟಿದ್ದಾರೆ.

READ MORE:News18
Card image cap

ಕುದುರೆ ಮೇಲೆ ಮೆರವಣಿಗೆ: ದಲಿತ ವರನಿಗೆ ಮೇಲ್ಜಾತಿಯವರಿಂದ ಹಲ್ಲೆ!

ಆಗ್ರಾ: ವಿವಾಹದ ದಿನದಂದು ಸಂಪ್ರದಾಯದ ಪ್ರಕಾರ ಕುದುರೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ದಲಿತ ವರನ ಮೇಲೆ ದಾಳಿ ನಡೆಸಿ, ಆತನನ್ನು ಕುದುರೆ ಮೇಲಿಂದ ಕೆಳಗಿಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಠಾಕೂರ್‌ ಸಮುದಾಯದವರು ತಮ್ಮ ಮೇಲೆ ಕಲ್ಲು ತೂರಾಟ ಮತ್ತು ಜಾತಿನಿಂದನೆ ಮಾಡಿದ್ದಾರೆ ಎಂದು ವರನ ಕಡೆಯವರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

READ MORE:asianetnews
Card image cap

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನ್ಯೂ ಜನರೇಷನ್ ಥಾರ್...

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ತಲೆಮಾರಿನ ಥಾರ್ ಕಾರಿನ ಚಿಕ್ರಗಳು ಸೋರಿಕೆಯಾಗಿದ್ದು, ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರ್‍‍ದೇಖೊ ಪ್ರಕಾರ ಸೋರಿಕೆಯಾದ ಚಿತ್ರಗಳಲ್ಲಿ ಥಾರ್ ಕಾರನ್ನು ಸಂಪೂರ್ಣವಾಗಿ ಮುಸುಕಿನಿಂದ ಮುಚ್ಚಲ್ಪಟ್ತಿದ್ದು, ಹೊಸ ಥಾರ್ ಹಿಂದಿನ ತಲೆಮಾರಿನ ಕಾರಿಗಿಂತಾ ಹೆಚ್ಚಿನ ಗಾತ್ರವನ್ನು ಪಡೆದುಕೊಂಡಿದೆ.

READ MORE:kannada.drivespark