ಸುದ್ದಿಗಳು  >  ರಾಜ್ಯ
Card image cap

ಒಂದಾದ ಗುರುಶಿಷ್ಯರು: ಇಂದು ಒಂದೇ ವೇದಿಕೆಗೆ ಬರಲಿದ್ದಾರೆ ದೇವೇಗೌಡ- ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಒಂದೇ ವೇದಿಕೆಯಡಿ ಸೇರಲಿದ್ದಾರೆ. ಈ ಮೂಲಕ ಉಪ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ.ರಾಜ್ಯದಲ್ಲಿ ಎದುರಾಗಿರುವ ಐದು ಕ್ಷೇತ್ರಗಳ ಉಪಚುನಾವಣೆಯ ಕುರಿತು ಎರಡೂ ಪಕ್ಷಗಳ ಮುಂದಿನ ಕಾರ್ಯತಂತ್ರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಇಂದು ನಗರ ಲಲಿತ್​ ಅಶೋಕ್​ ಹೊಟೇಲ್​ನಲ್ಲಿ 11 ಗಂಟೆಗೆ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ.


READ MORE: Vijayavani