ಸುದ್ದಿಗಳು  >  ರಾಜ್ಯ
Card image cap

ಮತ್ತೆ ವರುಣನ ಅಬ್ಬರ... ಕೆ.ಆರ್.ಎಸ್‌ ನಿಂದ ಹೆಚ್ಚಿದ ನೀರಿನ ಹೊರ ಹರಿವು

ಮಂಡ್ಯ: ಮಡಿಕೇರಿ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆ ಆರಂಭವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ‌. ಅಣೆಕಟ್ಟೆಗೆ 10,598 ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಕೆ.ಆರ್‌ಎಸ್‌ನ ನೀರಿನ ಮಟ್ಟ 124.80 ಅಡಿ ಇದ್ದು, ಹೊರಹರಿವು 11,988 ಕ್ಯೂಸೆಕ್ ಇದೆ. ಒಟ್ಟು 49.452. ಟಿಎಂಸಿ ನೀರಿನ ಸಂಗ್ರಹವಿದ್ದು, ಮಳೆ ಹೆಚ್ಚಾದರೆ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ‌.


READ MORE: kannada.eenaduindia